ಇದೇ ನನ್ನ ಉತ್ತರ
ಇದೇ ನನ್ನ ಉತ್ತರ
ನಿನ್ನ ಒಗಟಿಗೆ ಉತ್ತರ
ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ
.
ಇದೇ ನನ್ನ ಉತ್ತರ
.
ಚಿತ್ರ - ಬೆಳ್ಳಿ ಮೋಡ (1966)
ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
ಸಾಹಿತ್ಯ - ಆರ್.ಎನ್.ಜಯಗೋಪಾಲ್
.
ಬಳಸಿ ನಿಂತ ಬಳ್ಳಿಗೆ
ಮರವು ಕೊಡುವಾ ಉತ್ತರ
ಬಳಸಿ ನಿಂತ ಬಳ್ಳಿಗೆ
ಮರವು ಕೊಡುವಾ ಉತ್ತರ
ಅರಳಿ ನಿಂತ ಹೂವಿಗೆ
ದುಂಬಿ ಕೊಡುವಾ ಉತ್ತರ
.
ನಿನ್ನ ಒಗಟಿಗೆ ಉತ್ತರ
ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ
ಇದೇ ನನ್ನ ಉತ್ತರ
.
ಸಾಹಿತ್ಯ - ಆರ್.ಎನ್.ಜಯಗೋಪಾಲ್
ಸಂಗೀತ- ವಿಜಯಭಾಸ್ಕರ್
ಸಮರ್ಪಣೆ - ಪಿ.ಆರ್.ನಂದನ್ ಭಟ್
.
ಕುಲಕಿ ನಡೆವ ಹೆಜ್ಜೆಗೆ
ಗೆಜ್ಜೆ ಕೊಡುವ ಉತ್ತರ
ಕುಲಕಿ ನಡೆವ ಹೆಜ್ಜೆಗೆ
ಗೆಜ್ಜೆ ಕೊಡುವ ಉತ್ತರ
ತನ್ನ ಮಿಡಿವ ಬೆರಳಿಗೆ
ವೀಣೆ ಕೊಡುವ ಉತ್ತರ
.
ನಿನ್ನ ಒಗಟಿಗೆ ಉತ್ತರ
ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ
ಇದೇ ನನ್ನ ಉತ್ತರ
.
ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
ಸಾಹಿತ್ಯ - ಆರ್.ಎನ್.ಜಯಗೋಪಾಲ್
ಸಂಗೀತ- ವಿಜಯಭಾಸ್ಕರ್
.
ಹುಡುಕಿ ಬಂದ ಜೀವನದಿಗೆ
ಕಡಲು ಕೊಡುವ ಉತ್ತರ
ಮನವ ಸೆಳೆದಾ ನಲ್ಲೆಗೆ
ಇನಿಯ ಕೊಡುವ ಉತ್ತರ
.
ನಿನ್ನ ಒಗಟಿಗೆ ಉತ್ತರ
ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ
ಇದೇ ನನ್ನ ಉತ್ತರ
ಇದೇ ನನ್ನ ಉತ್ತರ
ನಿನ್ನ ಒಗಟಿಗೆ ಉತ್ತರ
ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ
ಇದೇ ನನ್ನ ಉತ್ತರ