ದೇವರೇ.... ನಿನಗೆ ದಯೆವಿಲ್ಲವೇ.....*
ನನ್ನೀ. ನೋವಿನ ಅರಿವಿಲ್ಲವೇ*
ಹೃದಯವಿಲ್ಲದೆ ಕಲ್ಲಾದೆಯಾ…..
ಕಲ್ಲಾಗಿ ಕರುಣೆಯ ನೀಗಿದೆಯಾ**
ನೀತಿವಂತಾ ಬಾಳಲೇ ಬೇಕೂ......
ಸತ್ಯವೆಂದೂ ಉಳಿಯಲೇ ಬೇಕೂ...
ದುಡಿಯುವಾತಾ ಬದುಕಲೇ ಬೇಕೂ....
ಎಂಬ ಮಾತೂ ಬರಿಯ ಸುಳ್ಳೇನೂ ...
.
ಚಿತ್ರ - ಬಾಳು ಬೆಳಗಿತು
ಮೂಲ ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
.
ಆಳಾಗಿ ದುಡಿವಾ ಅರಸಾಗಿ ಮೆರೆವಾ ..**
ಈ ಎರಡು ಬಗೆ ವೇಷ ನೀ... ನೀಡಿದೇ**
ಕಣ್ಣೆರಡರಂತೆ ಹೆಣ್ಣೆರಡ ಪಡೆದೆ
ಈ ಎರಡು ಬಗೆ ಪಾತ್ರ ನೀ ತಂದುದೇ***
ಕಣ್ಣೊಂದನುಳಿಸೆ ಇನ್ನೊಂದ ನಳಿಸೆ
ಈ ನಿನ್ನ ನ್ಯಾಯಕ್ಕೆ ಕಣ್ಣೆಲಿದೆ
ಕಣ್ಣೆಲಿದೆ... ಕಣ್ಣೆಲ್ಲಿದೆ**
ನೀತಿವಂತಾ ಬಾಳಲೇ ಬೇಕು
ಸತ್ಯವೆಂದೂ ಉಳಿಯಲೇ ಬೇ…ಕು
.
ಸಂಗೀತ - ವಿಜಯಭಾಸ್ಕರ್ ಹಾಗು ಸಾಹಿತ್ಯ - ವಿಜಯನಾರಸಿಂಹ
ಸಮರ್ಪಣೆ - ನಂದನ ಭಟ್
.
ಚೆಲುವಾದ ಕಂದಾ ಚಿಗುರಾಸೆ ತಂದಾ**
ಅದರಲ್ಲಿ ಒಲವೆಲ್ಲ ನಾ ತುಂಬಿದೆ**
ನೀ ಕೊಟ್ಟ ವರವಾ.. ಮುದ್ದಾಡಿ ನಲಿದೆ
ಈ ಕರುಳ ಸಂಬಂಧ ನೀ ತಂದುದೇ***
ಆ ಬಾಳ ನುಳಿಸೀ ಈ ಸಸಿಯ ಕೊಂದೆ
ಇದರಲ್ಲಿ ನೀ ತೋರೊ ದಯವೇನಿದೆ
ದಯವೇನಿದೆ…. ದಯವೇನಿದೆ....**
ನೀತಿವಂತಾ ಬಾಳಲೇ ಬೇಕೂ ...
ಸತ್ಯವೆಂದೂ ಉಳಿಯಲೇ ಬೇಕೂ...
ದುಡಿಯುವಾತಾ ಬದುಕಲೇ ಬೇಕೂ....
ಎಂಬ ಮಾತೂ ಬರಿಯ ಸುಳ್ಳೇನೂ ...