Shree VSS
By:- Shree VSS
********** ***********
(M) ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
(F) ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
(M) ನೀರಿಗೆ ಹೋಗೋ ಹೆಣ್ಣೇ ನಿಲ್ಲೇ ನಾ ಬರುತೀನಿ
ನಿನ್ನಾಣೆ ನಿನ್ನ ಕೊಡದಾಣೆ
ನಿನ್ನಾಣೆ ನಿನ್ನ ಕೊಡದಾಣೆ
ನಿಲ್ಲೂ ನಿಲ್ಲೆನ್ನವಳೆ ಕರದಾವೆ ಕೈಯಬಳೆ
ಬಿರಿದಾವೆ ನಿನ್ನ ನಗೆಮುಗುಳೆ
ಬಿರಿದಾವೆ ನಿನ್ನ ನಗೆಮುಗುಳೆ
M(F) ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
F: ಬಿಡು ಕೈಯ ಗೆಣೆಕಾರ ಕೊಡಹೊತ್ತ ನಡು ಭಾರ
ಹಿಡಿ ನಿನ್ನ ದಾರಿ ಸರದಾರ
ಹಿಡಿ ನಿನ್ನ ದಾರಿ ಸರದಾರ
M : ಸಿಡುಕ್ಯಾಕೆ ನನ್ನ ಜಾಣೆ ಸಿಡಿಲು ಬಡಿದಾರು ನಿನ್ನ
ಕಡಗಾದ ಕೈಯ ಬಿಡಲಾರೆ
ಕಡಗಾದ ಕೈಯ ಬಿಡಲಾರೆ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
F : ನೀನು ಕೋಡಂಗಿ ಗಂಡ ದಾರಿ ಬಿಟ್ಟರೆ ಚಂದ
ನಿಂಗು ನಂಗೆಲ್ಲಿಯ ಸಂಬಂಧ
ನಿಂಗು ನಂಗೆಲ್ಲಿಯ ಸಂಬಂಧ
M: ಬಂಗಾರ ಬೆಳ್ಳಿ ಒಡವೆ ಸಿಂಗಾರ ಮಾಡಿಸುವೆ
ಹೆಂಗಾರ ಒಪ್ಪಿಕೊಳ್ಳೆ ಎಲೆ ಚೆಲುವೆ
ಹೆಂಗಾರ ಒಪ್ಪಿಕೊಳ್ಳೆ ಎಲೆ ಚೆಲುವೆ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
F: ಬಣ್ಣಾದ ಸರದ ಮ್ಯಾಲೆ ಕಣ್ಣ್ಯಾಕೋ ಗಿಣಿರಾಮ
ಹಣ್ಣಿಲ್ಲವೇನೊ ಮೆಲುವೋಕೆ
ಹಣ್ಣಿಲ್ಲವೇನೊ ಮೆಲುವೋಕೆ
M: ನೀನು ಮಲ್ಲಿಗೆ ಬಳ್ಳಿ ನಾನಾದೆ ಮರವಿಲ್ಲಿ
ಸುತ್ತಿಕೊಳ್ಳೆ ನನ್ನ ಸೊಗದಲ್ಲಿ
ಸುತ್ತಿಕೊಳ್ಳೆ ನನ್ನ ಸೊಗದಲ್ಲಿ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
F : ಆಚೇಯ ಕೇರಿಯೋನೆ ಕುದ್ರೆ ಏರಿ ಬರುವೋನೆ
ಪಾರ್ವಾಳದಂಗೆ ಸುಳಿಯೋನೆ
ಪಾರ್ವಾಳದಂಗೆ ಸುಳಿಯೋನೆ
ಪಾರ್ವಾಳದಂಗೆ ಸುಳಿಯೋನೆ ಗೆಣೆಕಾರ
ದೂರು ಬಂದಾವು ನಿನ್ನಮ್ಯಾಲೆ
ದೂರು ಬಂದಾವು ನಿನ್ನಮ್ಯಾಲೆ
M: ದೂರು ಬಂದಾರು ಸರಿಯೇ ನೂರು ಕೊಟ್ಟರು ಸರಿಯೇ
ನಾರಿ ನಿನ್ನ ಬಿಟ್ಟು ಇರಲಾರೆ
ನಾರಿ ನಿನ್ನ ಬಿಟ್ಟು ಇರಲಾರೆ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
F: ಮಾತು ಮಾತನ್ನು ಬೆಳೆಸಿ ಯಾತಕ್ಕು ಸುಖವಿಲ್ಲ
ಸೋತೇನು ಬೇರೆ ಮಾತೇನು
ಸೋತೇನು ಬೇರೆ ಮಾತೇನು
M: ಆಚೆ ಕೇರೀಲಿ ನಾನು ಈಚೆ ಕೇರೀಲಿ ನೀನು
ಭಾಷೆ ತಾರೆಣ್ಣೆ ಬಲಗೈಲಿ
ಭಾಷೆ ತಾರೆಣ್ಣೆ ಬಲಗೈಲಿ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
Shree VSS
F: ಮಾತಿಗೆ ತಪ್ಪುವಂತ ಮಗಳಲ್ಲ ಕಣೋ ನಾನು
ಕಾದಿರೊ ಗೆಣೆಯಾ ನನಗಾಗಿ
ಕಾದಿರೊ ಗೆಣೆಯಾ ನನಗಾಗಿ
M: ನಾವಿಬ್ಬರೊಂದಾದ ಈ ಹಬ್ಬದಾನಂದ
M/F : ಹಬ್ಬಲಿ ಜಗವಾ ತಬ್ಬಾಲಿ
ಹಬ್ಬಲಿ ಜಗವಾ ತಬ್ಬಾಲಿ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
M/F : ಕೋಲು ಕೋಲಣ್ಣ ಕೋಲು ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ ಎಕ್ಕೋಲೆ ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ